10, 20 ಸಾವಿರ ಅಲ್ಲವೇ ಅಲ್ಲ.. ತಗಡಿನ ಶೆಡ್​ನಲ್ಲಿರುವ ಅಜ್ಜಿಗೆ ಬಂತು 1 ಲಕ್ಷ ರೂ. ಕರೆಂಟ್ ಬಿಲ್..!

Post by: 0

10, 20 ಸಾವಿರ ಅಲ್ಲವೇ ಅಲ್ಲ.. ತಗಡಿನ ಶೆಡ್​ನಲ್ಲಿರುವ ಅಜ್ಜಿಗೆ ಬಂತು 1 ಲಕ್ಷ ರೂ. ಕರೆಂಟ್ ಬಿಲ್..!

ಕೊಪ್ಪಳ: ರಾಜ್ಯ ಸರ್ಕಾರ 200 ಯೂನಿಟ್ ವರೆಗೆ ವಿದ್ಯುತ್ ಬಿಲ್ ಉಚಿತ ಎಂದು ಘೋಷಣೆ ಮಾಡಿದೆ. ಅಂತೆಯೇ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ವಿದ್ಯುತ್ ಸಂಸ್ಥೆಗಳು ಗ್ರಾಹಕರಿಗೆ ಶಾಕ್ ನೀಡೋದನ್ನು ಮುಂದುವರಿಸಿವೆ.

ಉಚಿತ ವಿದ್ಯುತ್​ ಘೋಷಣೆ ಬೆನ್ನಲ್ಲೇ ರಾಜ್ಯದ ಹಲವು ಭಾಗಗಳಲ್ಲಿರುವ ಮನೆಗಳ ಬಿಲ್​​ನಲ್ಲಿ ಈ ಹಿಂದೆ ಕಟ್ಟುತ್ತಿದ್ದ ಹಣಕ್ಕಿಂತ ಹೆಚ್ಚು ತೋರಿಸುತ್ತಿದೆ ಎಂಬ ಆರೋಪ ಕೇಳಿಬರ್ತಿದೆ. ಅದರ ಮುಂದುವರಿದ ಭಾಗವಾಗಿ 90 ವರ್ಷದ ವೃದ್ಧೆಯೊಬ್ಬರ ಮನೆಯ ಕರೆಂಟ್ ಬಿಲ್ ಬರೋಬ್ಬರಿ 1,03,315 ರೂಪಾಯಿ ಬಂದಿದೆ.

ಕೊಪ್ಪಳದ ಭಾಗ್ಯನಗರದ ನಿವಾಸಿ ಗೀರಿಜಮ್ಮ ಎಂಬ ವೃದ್ಧೆಯ ಕರೆಂಟ್ ಬಿಲ್ ಒಂದು ಲಕ್ಷಕ್ಕೂ ಅಧಿಕ ಬಂದಿದೆ. ಅಂದಹಾಗೆ ಇವರ ನಿವಾಸದಲ್ಲಿ ಇರೋದು ಕೇವಲ 2 ಬಲ್ಬುಗಳು. ಹೀಗಿರುವಾಗ ಇಷ್ಟೊಂದು ಬಿಲ್ ಬರಲು ಹೇಗೆ ಸಾಧ್ಯ ಎಂದು ಕಣ್ಣೀರಿಟ್ಟಿದ್ದಾರೆ.

ಈ ಹಿಂದೆ 70 ರಿಂದ 80 ರೂಪಾಯಿವರೆಗೆ ಬಿಲ್ ಬರ್ತಿತ್ತು. ಹೊಸ ಮೀಟರ್ ಅಳವಡಿಸಿದ ಬೆನ್ನಲ್ಲೇ 6 ತಿಂಗಳಲ್ಲಿ 1 ಲಕ್ಷ ರೂಪಾಯಿ ಬಿಲ್ ದಾಟಿದೆ. ಸಣ್ಣ ತಗಡಿನ ಶೆಡ್​ನಲ್ಲಿ ವಾಸಿಸುವ ಈ ವೃದ್ಧೆಗೆ 90 ವರ್ಷ ಆಗಿದೆ. ಕೇವಲ ಎರಡು ಬಲ್ಬ್​​ಗಳನ್ನು ಉರಿಸಿದ್ರೆ ಇಷ್ಟೊಂದು ಬಿಲ್ ಬರುತ್ತಾ ಅನ್ನೋ ಪ್ರಶ್ನೆ ಶುರುವಾಗಿದೆ.

Last modified on Thursday, 22 June 2023 15:39

Leave a comment

Make sure you enter all the required information, indicated by an asterisk (*). HTML code is not allowed.

No Internet Connection