ಪಾರ್ಟಿ ನೆಪದಲ್ಲಿ ಯುವತಿಯರನ್ನ ಕರೆಸಿಕೊಂಡು ಅತ್ಯಾಚಾರಕ್ಕೆ ಯತ್ನ..!! ಆರೋಪಿಗಳ ಬಂಧನ...

08 February, 2023
ಬೆಂಗಳೂರು: ಪಾರ್ಟಿ ನೆಪದಲ್ಲಿ ಯುವತಿಯರನ್ನ ಕರೆಸಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನ ಬೆಂಗಳೂರಿನ ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಫೆಬ್ರವರಿ 5 ರಂದು ಪಾರ್ಟಿ ನೆಪದಲ್ಲಿ ಆರೋಪಿಗಳು ಪರಿಚಯಸ್ತ ಯುವತಿಯರನ್ನಕರೆಸಿಕೊಂಡಿದ್ದರು ಅಂದು ಮಧ್ಯರಾತ್ರಿ 2.30ರವರೆಗೆ ಎಣ್ಣೆ ಪಾರ್ಟಿ ಮಾಡಿದ್ದರು. ಬಳಿಕ ನಶೆಯಲ್ಲಿದ್ದ ಜಮ್ಮು ಕಾಶ್ಮೀರ ಮೂಲದ ಯುವತಿ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಮತ್ತೊರ್ವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಯುವತಿ ತಪ್ಪಿಸಿಕೊಂಡು ಹೋಗಿ ಬಾತ್​ ರೂಮ್​​ನಲ್ಲಿ ಲಾಕ್ ಮಾಡಿಕೊಂಡು ಅಡಗಿಕೊಂಡಿದ್ದಾಳೆ. ಬಳಿಕ ಮರುದಿನ ಕೋರಮಂಗಲ ಠಾಣೆಗೆ ತೆರಳಿ ಯುವತಿ ಮಾಹಿತಿ ನೀಡಿ ದೂರು ದಾಖಲಿಸಿದ್ದಾಳೆ. ಇದೀಗ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಸ್ನೇಹಿತನ ಕೊಲೆ..!!! ದುಶ್ಮನ್ ಕಹಾ ಹೇ ಅಂದ್ರೆ ಬಗಲ್ ಮೇ ಹೇ...!!!!

08 February, 2023
ಹಾಸನ : ಕೊಟ್ಟ ಸಾಲವನ್ನ ವಾಪಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಹೆಣವಾಗಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಲಿಖಿತ್ ಗೌಡ ಕೊಲೆಯಾದ ವ್ಯಕ್ತಿಯಾಗಿದ್ದು, ಸಾಗರ್ ಎಂಬ ವ್ಯಕ್ತಿಗೆ 2.5 ಲಕ್ಷ ಹಣವನ್ನು ನೀಡಿದ ಎನ್ನಲಾಗಿದೆ. ಇನ್ನು ಸಾಲದ ಹಣವನ್ನು ವಾಪಸ್ ನೀಡುವಂತೆ ಲಿಖಿತ್ ಗೌಡ ಕೇಳಿದ್ದರಿಂದ ಸದ್ಯ ನನ್ನ ಬಳಿ ಹಣವಿಲ್ಲ ನಾನು ಕೊಟ್ಟಾಗ ಇಸ್ಕೊ ಬೇಕು ಅಂತ ಬೆದರಿಕೆ ಹಾಕಿದನಂತೆ ಈ ಹಿನ್ನೆಲೆಯಲ್ಲಿ ಮತ್ತೆ ರಾಜಿ ಸಂಧಾನದ ಮೂಲಕ ಪ್ರಕರಣ ತಣ್ಣಗಾಗಿತ್ತು ಆದರೆ ಭಾನುವಾರ ನವೀನ್ ಮತ್ತು ಸಾಗರ್ ಇಬ್ಬರೂ ಮಾರುತಿ ಕಾರಿನಲ್ಲಿ ಬಂದು ಹಣ ಕೊಡುವುದಾಗಿ ಆತನನ್ನು ಕರೆದುಕೊಂಡು ಹೋಗಿ ಕೊಲೆಗೈದಿದ್ದಾರೆ. ಕೊನೆಯದಾಗಿ ಲಿಖಿತ್ ಗೌಡ ಕಳೆದ ಎಂಟು ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಸ್ವಂತ ಕಾರ್ ಕ್ಲಿನಿಕ್ ಮಾಡಿ ವರ್ಷವೂ ಕಳೆದಿರಲಿಲ್ಲ ಆದರೆ ಹಣದ ವಿಚಾರವಾಗಿ ಸ್ನೇಹಿತರೆ ಕೊಲೆ ಮಾಡಿದ್ದು ಮಾತ್ರ ತುಂಬಾ ನೋವಿನ ಸಂಗತಿ.ಒಟ್ಟಾರೆ ಕಷ್ಟದಲ್ಲಿ ಸ್ನೇಹಿತರು ಹಾಕ್ತಾರೆ ಅನ್ನೋ ಮಾತು ಸುಳ್ಳಾಗಿದೆ ದುಶ್ಮನ್ ಕಹಾ ಹೇ ಅಂದ್ರೆ…
No Internet Connection