ಬೆಕ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೆಚ್.ಎನ್.ಲವಣ್ಣ ಅವಿರೋಧವಾಗಿ ಆಯ್ಕೆ..

08 February, 2023
ಶ್ರವಣಬೆಳಗೊಳ: ಹೋಬಳಿಯ ಬೆಕ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಹಡೇನಹಳ್ಳಿ ಹೆಚ್.ಎನ್.ಲವಣ್ಣ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಈ ಹಿಂದಿನ ಅಧ್ಯಕ್ಷ ಕೇಶವಮೂರ್ತಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಹಡೇನಹಳ್ಳಿ ಹೆಚ್.ಎನ್.ಲವಣ್ಣ ಮಾತ್ರ ನಾಮ ಪತ್ರ ಸಲ್ಲಿಸಿದ್ದರು. ಮತ್ಯಾವ ನಾಮಪತ್ರಗಳು ಸಲ್ಲಿಕೆಯಾಗದ ಕಾರಣ ಚುನಾವಣಾಧಿಕಾರಿ ಸುನಿಲ್ ಕುಮಾರ್ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ಅವಿರೋಧ ಆಯ್ಕೆ ಪ್ರಕಟಿಸಿದರು. ನೂತನ ಅಧ್ಯಕ್ಷ ಹಡೇನಹಳ್ಳಿ ಹೆಚ್.ಎನ್.ಲವಣ್ಣ ಮಾತನಾಡಿ, ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭೀವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇವೆ. ಎಲ್ಲಾ ಸದಸ್ಯರ ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಿದರೆ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ರೂಪಿಸಬಹುದು ಎಂದು ಹೇಳಿದರು.ಮಾಜಿ ಅಧ್ಯಕ್ಷ ಕೇಶವಮೂರ್ತಿ, ಉಪಾಧ್ಯಕ್ಷೆ ಪ್ರೀತಿ ಕುಮಾರಿ ಸೇರಿದಂತೆ 14 ಸದಸ್ಯರು ಹಾಜರಿದ್ದರು. ರಾಜ್ಯ ಮಾರಾಟ ಮಹಾ ಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಕನ್ನಡ ಸಾಹಿತ್ಯ…

ತುಳು ಸ್ಥಾನಮಾನ ವಿಚಾರ.ಸಮಿತಿಯ ವರದಿ ನೋಡಿಕೊಂಡು ಮುಂದಿನ ಕ್ರಮ:- ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್

08 February, 2023
ಉಡುಪಿ: ತುಳು ಭಾಷೆಗೆ ಸ್ಥಾನಮಾನ ಸಂಬಂಧ ಸಾಧಕ-ಬಾಧಕಗಳ ಚರ್ಚೆಗೋಸ್ಕರ ಸಮಿತಿ ರಚಿಸಲಾಗಿದ್ದು, ಸಮಿತಿಯ ವರದಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ಕನ್ನಡ ಬಿಟ್ಟು ಬೇರೆ ಏನೂ ಯೋಚನೆ ಮಾಡಲು ಸಾಧ್ಯವಿಲ್ಲ. ತುಳು ಕನ್ನಡದ ಚಟುವಟಿಕೆ ಮತ್ತು ಕನ್ನಡ ನಾಡಿನ ಜೊತೆ ಜೊತೆಗೆ ಯಾವತ್ತೂ ಇದೆ. ತುಳುನಾಡು ಪ್ರತ್ಯೇಕವಾಗಿ ಬೇಕು ಎಂದು ನಾವು ಕೇಳುತ್ತಿಲ್ಲ. ತುಳು ಭಾಷೆಗೆ ಎರಡನೇ ಆದ್ಯತೆಯನ್ನು ಕೇಳುತ್ತಿದ್ದೇವೆ ಎಂದರು. ಕನ್ನಡಕ್ಕೆ ಪರಮೋಚ್ಚವಾದ ಎಲ್ಲಾ ಸ್ಥಾನಮಾನಗಳು ಸಿಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಆದ್ಯತೆಗಳನ್ನ ಕೊಡುವ ಪ್ರಕ್ರಿಯೆ ಇದೆ. ಹಲವಾರು ಮನವಿಗಳು ಬಂದ ನಂತರ ಸಾಧಕ ಬಾದಕಗಳ ಚರ್ಚೆಗೋಸ್ಕರ ಸಮಿತಿ ರಚಿಸಲಾಗಿದೆ . ಸಮಿತಿ ಕೊಡುವ ವರದಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದವರು ತಿಳಿಸಿದರು.

ಲವ್ ಡೇ ಇಲ್ಲ ಇನ್‌ ಮೇಲೆ ಹಗ್ಗ್ ಡೇ..!! ಕೇಂದ್ರ ಸರ್ಕಾರದಿಂದ ಆದೇಶ..!

08 February, 2023
ದೆಹಲಿ : ಫೆಬ್ರವರಿ 14ರಂದು ವಿಶ್ವವೇ ಪ್ರೀತಿಯ ದಿನವನ್ನಾಗಿ ಆಚರಿಸುತ್ತದೆ. ಇದೀಗ ಕೇಂದ್ರ ಸರ್ಕಾರ ಲವ್‌ ಡೇ ದಿನವನ್ನು 'ಹಸು ಅಪ್ಪುಗೆಯ ದಿನ'ವನ್ನಾಗಿ ಆಚರಿಸುವಂತೆ ಕರೆ ನೀಡಿದೆ. ಭಾರತೀಯ ಸಂಸ್ಕೃತಿ ಮತ್ತು ಸ್ಥಳೀಯ ಆರ್ಥಿಕತೆಯ ಬೆನ್ನೆಲುಬು ಗೋವು ಎಂದು ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ಹಸು ಅಪ್ಪುಗೆಯ ದಿನ'ವನ್ನಾಗಿ ಆಚರಿಸುವಂತೆ ಕರೆ ನೀಡಿದೆ. ಗೋವು ತಾಯಿಯಂತೆ ಪ್ರಕೃತಿಯನ್ನು ರಕ್ಷಿಸುತ್ತದೆ ಹಾಗಾಗಿ ಗೋಪ್ರೇಮಿಗಳು ಫೆ.14ನ್ನು 'ಗೋವು ಅಪ್ಪುಗೆ ದಿನ'ವನ್ನಾಗಿ ಆಚರಿಸಬೇಕು ಎಂದು ಪ್ರಾಣಿ ಸಂರಕ್ಷಣಾ ಮಂಡಳಿ ವಿಶೇಷ ಸುತ್ತೋಲೆ ಮೂಲಕ ತಿಳಿಸಿದೆ.ನಿರ್ದೇಶನ ನೀಡಿದೆ.
No Internet Connection