ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಬಿಡುಗಡೆ..!!! ಇಲ್ಲಿದೆ ಟೂರ್ನಿ ವಿವರ..!!

Post by: 0

ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಬಿಡುಗಡೆ..!!! ಇಲ್ಲಿದೆ ಟೂರ್ನಿ ವಿವರ..!!

ನವದೆಹಲಿ: 13ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಕೊನೆಗೂ ಬಿಡುಗಡೆಯಾಗಿದೆ. ಅಕ್ಟೋಬರ್ 5ರಿಂದ ನವೆಂಬರ್ 19ರ ವರೆಗೆ ಪ್ರತಿಷ್ಠಿತ ಜಾಗತಿಕ ಟೂರ್ನಿ ನಡೆಯಲಿದೆ. ಸೆಮಿಫೈನಲ್ ಪಂದ್ಯವನ್ನು ಮುಂಬೈ ಮತ್ತು ಕೋಲ್ಕತದಲ್ಲಿ ನವೆಂಬರ್ 15 ಮತ್ತು 16 ರಂದು ಆಯೋಜಿಸಲಾಗಿದೆ. ಫೈನಲ್ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಐಸಿಸಿ ಮತ್ತು ಅತಿಥೇಯ ಬಿಸಿಸಿಐ ಮುಂಬೈನಲ್ಲಿ ಜಂಟಿಯಾಗಿ ಆಯೋಜಿಸಿರುವ ವಿಶೇಷ ಸಮಾರಂಭದಲ್ಲಿ ಟೂರ್ನಿಯ ವೇಳಾಪಟ್ಟಿ ಅನಾವರಣಗೊಳಿಸಲಾಯಿತು. ಇತ್ತೀಚೆಗೆ ಓವಲ್​ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಫೈನಲ್ ವೇಳೆ ಆತಿಥೇಯ ಬಿಸಿಸಿಐ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಐಸಿಸಿಗೆ ಸಲ್ಲಿಸಿತ್ತು. ಬಳಿಕ ವೇಳಾಪಟ್ಟಿಯ ಬಗ್ಗೆ ಪಾಕಿಸ್ತಾನ ತಗಾದೆ ತೆಗೆದಿದ್ದ ಕಾರಣ. ಅದರ ಬಿಡುಗಡೆ ವಿಳಂಬಗೊಂಡಿತ್ತು.

ಆಗಸದಲ್ಲಿ ಅನಾವರಣಗೊಂಡ ಟ್ರೋಫಿ
ವಿಶ್ವಕಪ್ ಟ್ರೋಫಿಯನ್ನು ವಿಶೇಷವಾಗಿ ಆಗಸದಿಂದ ಅನಾವರಣಗೊಳಿಸಲಾಗಿದೆ. ಭೂಮಿಯಿಂದ ಸುಮಾರು 1,20,000 ಅಡಿ ಎತ್ತರದಲ್ಲಿ ಬಲೂನ್‌ಗೆ ಕಟ್ಟಿದ ಪ್ರತಿಷ್ಠಿತ ಬೆಳ್ಳಿಯ ಟ್ರೋಫಿಯನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಕರ್ಷಕವಾಗಿ ಕೆಳಗಿಳಿಸಲಾಯಿತು. ಇದು ಗಗನಕ್ಕೇರಿದ ಮೊದಲ ಕ್ರೀಡಾ ಟ್ರೋಫಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

Last modified on Tuesday, 27 June 2023 15:19

Leave a comment

Make sure you enter all the required information, indicated by an asterisk (*). HTML code is not allowed.

No Internet Connection