ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ..!!! ಚಿಕಿತ್ಸೆ ಫಲಿಸದೇ ಯುವಕ ಸಾವು..!!!

08 February, 2023
ಬೆಳ್ತಂಗಡಿ: ನಾಲ್ಕು ದಿನಗಳ ಹಿಂದೆ ನಡೆದ ಟಿಪ್ಪರ್ ಮತ್ತು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಸೌತಡ್ಕದಲ್ಲಿ ನಡೆದಿದೆ.ಕೊಕ್ಕಡ ಸೌತಡ್ಕ ನಿವಾಸಿ ಸಿರಾಜ್ ಮೃತ ದುರ್ದೈವಿ.ಟಿಪ್ಪರ್ ಮತ್ತು ಸಿರಾಜ್ ಸಂಚರಿಸುತ್ತಿದ್ದ ಬೈಕ್ ನಡುವೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಕೆಂಪಕೋಡಿ ಎಂಬಲ್ಲಿ ಅಪಘಾತವಾಗಿತ್ತು. ಪರಿಣಾಮ ಸಿರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಪಘಾತದ ತೀವ್ರತೆಗೆ ಪ್ರಜ್ಞಾಹೀನ ಸಿರಾಜ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಸಿರಾಜ್ ಎಸ್‌ಕೆಎಸ್‌ಎಸ್‌ಎಫ್‌ ಕೊಕ್ಕಡ ಶಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಿರಾಜ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.

ಟ್ರಾಕ್ಟರ್ ಗೆ ಸಿಲುಕಿ ಬಾಲಕ ಸಾವು...!!

08 February, 2023
ಅಥಣಿ: ಶಾಲೆಗೆ ಹೋಗಿದ್ದ ಬಾಲಕ ಚಿಕ್ಕಪ್ಪನ ಜೊತೆ ಟ್ರ್ಯಾಕ್ಟರ್ ನಲ್ಲಿ ಬರೋವಾಗ ಬಿದ್ದು ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲೆ ಸಾವನ್ನಪ್ಪಿರುವ ದಾರುಣ ಘಟನೆ ಅಥಣಿ ತಾಲ್ಲೂಕಿನ ತೆವರಗಟ್ಟಿ ಗ್ರಾಮದಲ್ಲಿ ನಡೆದಿದೆ. ಸುದರ್ಶನ ನಿಲಜಗಿ(7) ಮೃತ ಬಾಲಕನಾಗಿದ್ದು ಶಾಲೆಗೆಂದು ಹೋಗಿ ಶವವಾಗಿ ಬಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಚಿಕ್ಕಪ್ಪನ ಜತೆ ಟ್ರಾಕ್ಟರ್ ನಲ್ಲಿ ಮನೆಗೆ ಬರುತ್ತಿದ್ದ ಬಾಲಕ ಟ್ರ್ಯಾಕ್ಟರ್ ನಿಂದ ಇಳಿಯುವ ಸಂದರ್ಭದಲ್ಲಿ ಬಾಲಕನ ಬ್ಯಾಗ್ ಟ್ರ್ಯಾಕ್ಟರಿಗೆ ಸಿಲುಕಿ ಕೆಳಗೆ ಬಿದ್ದಿದ್ದಾನೆ. ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ದಾಖಲಾಗಿದೆ.

ಕಾರಿಗೆ ಟ್ಯಾಂಕರ್ ಡಿಕ್ಕಿ ಮೂವರ ಸಾವು..!!

08 February, 2023
ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗಟಿಕೊಪ್ಪ ಗ್ರಾಮದ ಸಮೀಪ ಟ್ಯಾಂಕರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ.ಮೃತರು ಹುಬ್ಬಳ್ಳಿ ಮೊಹಮ್ಮದ್ ಇಶಾನ್ , ಮೊಹಮದ್ ಸೈಫ್ , ಇಸ್ಮಾಯಿಲ್ ಎಂದು ತಿಳಿದು ಬಂದಿದೆ. ಈ ಮೂವರು ಸ್ನೇಹಿತರು ಕಾರ್​ನಲ್ಲಿ ಪ್ರಯಾಣ ಮಾಡುವಾಗ ಪ್ರವಾಸಕ್ಕೆ ಹೊರಟಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.ಕಾರಿನಲ್ಲಿ 6 ಜನ ಸ್ನೇಹಿತರು ದೇವರ ದರ್ಶನಕ್ಕೆ ಕಾರವಾರಕ್ಕೆ ತೆರಳುತ್ತಿದ್ದರು. ಕಲಘಟಗಿ ಬಳಿ ಅಪಘಾತ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
No Internet Connection