ತಾನೇ ತಂದ ಮಚ್ಚಿನಿಂದ..!!ಮಂಡ್ಯದಲ್ಲಿ ಹಾಡಹಗಲೇ ರೌಡಿಶೀಟರ್​ ಬರ್ಬರ ಹತ್ಯೆ...!!

Post by: 0

ತಾನೇ ತಂದ ಮಚ್ಚಿನಿಂದ..!!ಮಂಡ್ಯದಲ್ಲಿ ಹಾಡಹಗಲೇ ರೌಡಿಶೀಟರ್​ ಬರ್ಬರ ಹತ್ಯೆ...!!

ಮಂಡ್ಯ: ರೌಡಿಶೀಟರ್​ ಒಬ್ಬನನ್ನು ಸ್ನೇಹಿತರೆ ಕತ್ತು ಕತ್ತರಿಸಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆಆರ್​ಎಸ್​ ಪೊಲೀಸ್​ ಠಾಣಾ ವ್ಯಾಪ್ತಿಯ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದವರನ್ನು ಸುಧೀರ್​(35) ಎಂದು ಗುರುತಿಸಲಾಗಿದ್ದು, ಪಾರ್ಟಿ ಮಾಡುವ ವೇಳೆ ವಿಚಾರ ಒಂದಕ್ಕೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ.

ತಾನೇ ತಂದ ಮಚ್ಚಿನಿಂದ ಕೊಲೆ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಣ ತಾಲ್ಲೂಕಿನ ಹುಲಿಕೆರೆ ನಿವಾಸಿಯಾದ ಸುಧೀರ್​ ತನ್ನ ಸ್ನೇಹಿತ ಪೂರ್ಣಚಂದ್ರ ಸೇರಿದಂತೆ ಇನ್ನಿತರ ಜೊತೆ ಗ್ರಾಮದ ಟೀ ಅಂಗಡಿ ಮುಂಭಾಗ ಎಣ್ಣೆ ಪಾರ್ಟಿ ಮಾಡುತ್ತಿದ್ದ. ಈ ವೇಳೆ ವಿಚಾರ ಒಂದಕ್ಕೆ ಇಬ್ಬರು ಸ್ನೇಹಿತರ ನಡುವೆ ಗಲಾಟೆ ಶುರುವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಸುಧೀರ್ ತನ್ನ ಮನೆಗೆ ತೆರಳಿ ಮಚ್ಚನ್ನು ತಂದಿದ್ದಾನೆ.

ಈ ವೇಳೆ ಪೂರ್ಣಚಂದ್ರ ಹಾಗೂ ಇನ್ನಿತರರು ಸುಧೀರ್​ ಬಳಿ ಇದ್ದ ಮಚ್ಚನನ್ನು ಕಿತ್ತುಕೊಂಡು ಸುಮ್ಮನಾಗುವಂತೆ ಹೇಳಿದ್ದರು. ಬಳಿಕ ಪಾರ್ಟಿಯಿಂದ ಎದ್ದು ಬಂದ ಸುಧೀರ್​ನನ್ನು ಹಿಂಬಾಲಿಸಿ ಪೂರ್ಣಚಂದ್ರ ಹಾಗೂ ಸ್ನೇಹಿತರು ಆತನ ಕತ್ತನ್ನು ಕತ್ತರಿಸಿ ಪರಾರಿಯಾಗಿದ್ಧಾರೆ. ಗ್ರಾಮದ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಸತ್ತು ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ಧಾರೆ.

ಸ್ಥಳಕ್ಕೆ ಭೇಟಿ ನೀಡಿದ ಕೆಆರ್​ಎಸ್​ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸುಧೀರ್​ ಹಾಗೂ ಪೂರ್ಣಚಂದ್ರನ ನಡುವೆ ಹಳೇ ದ್ವೇಷವಿದ್ದ ಕಾರಣ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

Leave a comment

Make sure you enter all the required information, indicated by an asterisk (*). HTML code is not allowed.

No Internet Connection