ಅಥಣಿ: ಶಾಲೆಗೆ ಹೋಗಿದ್ದ ಬಾಲಕ ಚಿಕ್ಕಪ್ಪನ ಜೊತೆ ಟ್ರ್ಯಾಕ್ಟರ್ ನಲ್ಲಿ ಬರೋವಾಗ ಬಿದ್ದು ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲೆ ಸಾವನ್ನಪ್ಪಿರುವ ದಾರುಣ ಘಟನೆ ಅಥಣಿ ತಾಲ್ಲೂಕಿನ ತೆವರಗಟ್ಟಿ ಗ್ರಾಮದಲ್ಲಿ ನಡೆದಿದೆ. ಸುದರ್ಶನ ನಿಲಜಗಿ(7) ಮೃತ ಬಾಲಕನಾಗಿದ್ದು ಶಾಲೆಗೆಂದು ಹೋಗಿ ಶವವಾಗಿ ಬಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಚಿಕ್ಕಪ್ಪನ ಜತೆ ಟ್ರಾಕ್ಟರ್ ನಲ್ಲಿ ಮನೆಗೆ ಬರುತ್ತಿದ್ದ ಬಾಲಕ ಟ್ರ್ಯಾಕ್ಟರ್ ನಿಂದ ಇಳಿಯುವ ಸಂದರ್ಭದಲ್ಲಿ ಬಾಲಕನ ಬ್ಯಾಗ್ ಟ್ರ್ಯಾಕ್ಟರಿಗೆ ಸಿಲುಕಿ ಕೆಳಗೆ ಬಿದ್ದಿದ್ದಾನೆ. ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ದಾಖಲಾಗಿದೆ.
ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗಟಿಕೊಪ್ಪ ಗ್ರಾಮದ ಸಮೀಪ ಟ್ಯಾಂಕರ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ದುರ್ಮರಣಕ್ಕೀಡಾದ ಘಟನೆ ನಡೆದಿದೆ.ಮೃತರು ಹುಬ್ಬಳ್ಳಿ ಮೊಹಮ್ಮದ್ ಇಶಾನ್ , ಮೊಹಮದ್ ಸೈಫ್ , ಇಸ್ಮಾಯಿಲ್ ಎಂದು ತಿಳಿದು ಬಂದಿದೆ. ಈ ಮೂವರು ಸ್ನೇಹಿತರು ಕಾರ್ನಲ್ಲಿ ಪ್ರಯಾಣ ಮಾಡುವಾಗ ಪ್ರವಾಸಕ್ಕೆ ಹೊರಟಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.ಕಾರಿನಲ್ಲಿ 6 ಜನ ಸ್ನೇಹಿತರು ದೇವರ ದರ್ಶನಕ್ಕೆ ಕಾರವಾರಕ್ಕೆ ತೆರಳುತ್ತಿದ್ದರು. ಕಲಘಟಗಿ ಬಳಿ ಅಪಘಾತ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಪಾರ್ಟಿ ನೆಪದಲ್ಲಿ ಯುವತಿಯರನ್ನ ಕರೆಸಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನ ಬೆಂಗಳೂರಿನ ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಫೆಬ್ರವರಿ 5 ರಂದು ಪಾರ್ಟಿ ನೆಪದಲ್ಲಿ ಆರೋಪಿಗಳು ಪರಿಚಯಸ್ತ ಯುವತಿಯರನ್ನಕರೆಸಿಕೊಂಡಿದ್ದರು ಅಂದು ಮಧ್ಯರಾತ್ರಿ 2.30ರವರೆಗೆ ಎಣ್ಣೆ ಪಾರ್ಟಿ ಮಾಡಿದ್ದರು. ಬಳಿಕ ನಶೆಯಲ್ಲಿದ್ದ ಜಮ್ಮು ಕಾಶ್ಮೀರ ಮೂಲದ ಯುವತಿ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ಹಿಂದೂಗಳ ಹತ್ಯೆಗಳಾಗಿವೆ ಎಂದು ಹೇಳಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ, ನಮ್ಮ ಕಾಲದಲ್ಲಿ ಹಿಂದೂಗಳಷ್ಟೇ ಅಲ್ಲ, ಅಲ್ಪಸಂಖ್ಯಾತರ ಕೊಲೆ ಆಗಿವೆ. ಅವುಗಳೆಲ್ಲ ಬೇರೆ ಬೇರೆ ವಿಚಾರಕ್ಕೆ ಆಗಿರುವ ಕೊಲೆಗಳಾಗಿವೆ.
ನಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಹಿಂದೂಗಳ ಹತ್ಯೆಯಾಗಲು ಆರ್ಎಸ್ಎಸ್, ಬಿಜೆಪಿಯವರೇ ಕಾರಣರಾಗಿದ್ದಾರೆ. ಪರೇಶ್ ಮೇಸ್ತ ಕೊಲೆಯಾದಾಗ ದೊಡ್ಡ ಗಲಾಟೆ ಮಾಡಿದ್ದರು. ಆಗ ಮೇಸ್ತ ಪ್ರಕರಣವನ್ನ ಸಿಬಿಐಗೆ ಕೊಟ್ಟಿದ್ದೆ, ಆಮೇಲೆ ಏನಾಯ್ತು ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಪಾಕಿಸ್ತಾನದಲ್ಲಿ ಸ್ಪರ್ಧೆ ಮಾಡಿದರಷ್ಟೇ 150 ಸ್ಥಾನ ಗೆಲ್ಲುತ್ತದೆ ಎಂದು ಲೇವಡಿ ಮಾಡಿದ್ದ ಶಾಸಕ ಸಿ.ಟಿ.ರವಿಗೆ ಟಾಂಗ್ ಕೊಟ್ಟ ಸಿದ್ಧರಾಮಯ್ಯ, ಕರ್ನಾಟಕ ಪಾಕಿಸ್ತಾನದಲ್ಲಿ ಇದೆಯಾ?ಭಾರತದಲ್ಲಿದೆಯಾ? ಚುನಾವಣೆ ನಡೆಯುತ್ತಿರುವುದು ಪಾಕಿಸ್ತಾನದಲ್ಲಾ? ಕರ್ನಾಟಕದಲ್ಲಾ? ಪೆದ್ದು ಪೆದ್ದಾಗಿ ಮಾತನಾಡುತ್ತೀರಲ್ಲಾ ಎಂದು ಕಿಡಿಕಾರಿದರು.
ದೆಹಲಿ : ಫೆಬ್ರವರಿ 14ರಂದು ವಿಶ್ವವೇ ಪ್ರೀತಿಯ ದಿನವನ್ನಾಗಿ ಆಚರಿಸುತ್ತದೆ. ಇದೀಗ ಕೇಂದ್ರ ಸರ್ಕಾರ ಲವ್ ಡೇ ದಿನವನ್ನು 'ಹಸು ಅಪ್ಪುಗೆಯ ದಿನ'ವನ್ನಾಗಿ ಆಚರಿಸುವಂತೆ ಕರೆ ನೀಡಿದೆ. ಭಾರತೀಯ ಸಂಸ್ಕೃತಿ ಮತ್ತು ಸ್ಥಳೀಯ ಆರ್ಥಿಕತೆಯ ಬೆನ್ನೆಲುಬು ಗೋವು ಎಂದು ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ಹಸು ಅಪ್ಪುಗೆಯ ದಿನ'ವನ್ನಾಗಿ ಆಚರಿಸುವಂತೆ ಕರೆ ನೀಡಿದೆ. ಗೋವು ತಾಯಿಯಂತೆ ಪ್ರಕೃತಿಯನ್ನು ರಕ್ಷಿಸುತ್ತದೆ ಹಾಗಾಗಿ ಗೋಪ್ರೇಮಿಗಳು ಫೆ.14ನ್ನು 'ಗೋವು ಅಪ್ಪುಗೆ ದಿನ'ವನ್ನಾಗಿ ಆಚರಿಸಬೇಕು ಎಂದು ಪ್ರಾಣಿ ಸಂರಕ್ಷಣಾ ಮಂಡಳಿ ವಿಶೇಷ ಸುತ್ತೋಲೆ ಮೂಲಕ ತಿಳಿಸಿದೆ.ನಿರ್ದೇಶನ ನೀಡಿದೆ.
ಸಿನಿಮಾ: ಸಿನಿಮಾ ರಂಗದಲ್ಲಿ ಲೈಂಗಿಕ ಕಿರುಕುಳದ ವಿಚಾರಕ್ಕೆ ಸಂಬಂಧಿಸಿದಂತೆ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ನಟಿ ನಯನತಾರಾ ಮಾತನಾಡಿದ್ದು, ಈ ಬಗ್ಗೆ ಪತ್ರಿಕೆಯೊಂದರ ಸಂದರ್ಶನದ ವೇಳೆ ಅವರು ವಿಷಯ ಬಹಿರಂಗ ಮಾಡಿದ್ದಾರೆ.ದೊಡ್ಡ ಚಲನ ಚಿತ್ರವೊಂದರಲ್ಲಿ ನಟಿಸಲು ಆಫರ್ ನೀಡಿದ ಡೈರೆಕ್ಟರ್ ವೋರ್ವ, ಅವಕಾಶಕ್ಕೆ ಪ್ರತಿಯಾಗಿ ತನ್ನೊಂದಿಗೆ ದೈಹಿಕವಾಗಿ ಸಹಕರಿಸಬೇಕು ಎಂದು ಕೇಳಿದ್ದು, ಆತನ ಮಾತನ್ನು ತಿರಸ್ಕರಿಸಿದ ನಯನತಾರಾ, ಖಡಕ್ ಆಗಿ ಪ್ರತ್ಯುತ್ತರ ನೀಡಿದ್ದರಂತೆ.ನನಗೆ ನನ್ನ ನಟನಾ ಸಾಮರ್ಥ್ಯದ ಬಗ್ಗೆ ವಿಶ್ವಾಸವಿದೆ. ಚಿತ್ರದಲ್ಲಿ ಪಾತ್ರ ನೀಡುವ ವಿಚಾರದಲ್ಲಿ ಬೇರೆ ಯಾವುದನ್ನೂ ನನ್ನಿಂದ ನಿರೀಕ್ಷೆ ಮಾಡಬೇಡಿ ಎಂದು ನೇರವಾಗಿ ಹೇಳಿರುವುದಾಗಿ ನಯನತಾರಾ ಹೇಳಿದರು.
ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿ, ಕೊಡಿಗೆಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೀಣಾ ಎಂಬ ಮುಖ್ಯ ಶಿಕ್ಷಕಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲಸಕ್ಕಾಗಿ ಯೋಜನೆ ಮಾಡಿಕೊಂಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳ ಪೋಷಕರುಗಳಾದ ರಘುಕುಮಾರ್ ರವರ ನೇತೃತ್ವದಲ್ಲಿ ಇಂದು ಸರ್ಕಾರಿ ಶಾಲೆಯ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರಘುಕುಮಾರ್ ಮುಖ್ಯ ಶಿಕ್ಷಕಿ ವೀಣಾ ಅವರು, ಬಂದಾಗಿನಿಂದ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಉತ್ತಮವಾಗಿದ್ದು, ಎಸ್, ಎಸ್, ಎಲ್, ಸಿ ,ಫಲಿತಾಂಶ ಜಿಲ್ಲೆಯಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯಲು ಈ ಶಿಕ್ಷಕಿಯು ನೀಡುವ ಗುಣಮಟ್ಟದ ಶಿಕ್ಷಣ, ಹಾಗೂ ಇಂಗ್ಲಿಷ್ ಪರಿಣಿತಿ, ಮಕ್ಕಳಲ್ಲೂ ಉತ್ತೇಜಿಸಿ, ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಾಗಿರುತ್ತಾರೆ. ಜೊತೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪೆಣಂಬೂತವಾಗಿರುವ ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಕ್ಕಳಿಗೆ ಅರ್ಥೈಸುತ್ತಿದ್ದರು, ಆದರೆ ಈ ಮುಖ್ಯ ಶಿಕ್ಷಕಿಯನ್ನು ತಾಲೂಕು ಶಿಕ್ಷಣಾಧಿಕಾರಿಯ ಕಚೇರಿಗೆ ನಿಯೋಜನೆ ಮಾಡಿಕೊಂಡಿರುವುದು ಖಂಡನೀಯ ಎಂದರು.
ಈ ಬಗ್ಗೆ ಈ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರ ಮುಖಾಂತರ ಒಂದು ಅರ್ಜಿಯನ್ನು ಸಹ ನೀಡಲಾಗಿದ್ದು, ಇದಕ್ಕೆ ಉತ್ತರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮುಖ್ಯ ಶಿಕ್ಷಕಿ ವೀಣಾ ಅವರನ್ನು ಮತ್ತೆ ಅದೇ ಶಾಲೆಗೆ ನಿಯೋಜನೆ ಮಾಡುತ್ತೇವೆ ಎಂಬ ಆದೇಶವನ್ನು ಮಾಡಿದ್ದಾರೆ, ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಅವರು ಇಲ್ಲಿಯವರೆಗೂ ಯಾವುದೇ ನಿಯೋಜನೆ ಮಾಡದೆ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದರು.
ಇನ್ನು ಮತ್ತೊಬ್ಬ ಪೋಷಕರಾದ ಸೋಮನಹಳ್ಳಿ ಜಗದೀಶ್ ಅವರು ಮಾತನಾಡಿ. ಈ ಶಾಲೆಗೆ ಕಳೆದ ಹತ್ತು ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವೀಣಾ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಿಯೋಜನೆ ಮಾಡಿರುತ್ತಾರೆ. ಇನ್ನೇನು ಸಮೀಪದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರಲಿದ್ದು, ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳುತ್ತದೆ, ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಲು ಈ ಶಿಕ್ಷಕಿಯೂ ಇಲ್ಲದಿರುವುದರಿಂದ ಸಾಧ್ಯವಾಗುತ್ತಿಲ್ಲ, ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಕೂಡಲೇ, ಪ್ರಭಾರದಲ್ಲಿರುವ ಈ ಮುಖ್ಯ ಶಿಕ್ಷಕಿಯನ್ನು ಮತ್ತೆ ಸರ್ಕಾರಿ ಪ್ರೌಢಶಾಲೆ ಕೊಡಗಿಹಳ್ಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.
ಹಾಸನ : ಕೊಟ್ಟ ಸಾಲವನ್ನ ವಾಪಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಹೆಣವಾಗಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಲಿಖಿತ್ ಗೌಡ ಕೊಲೆಯಾದ ವ್ಯಕ್ತಿಯಾಗಿದ್ದು, ಸಾಗರ್ ಎಂಬ ವ್ಯಕ್ತಿಗೆ 2.5 ಲಕ್ಷ ಹಣವನ್ನು ನೀಡಿದ ಎನ್ನಲಾಗಿದೆ. ಇನ್ನು ಸಾಲದ ಹಣವನ್ನು ವಾಪಸ್ ನೀಡುವಂತೆ ಲಿಖಿತ್ ಗೌಡ ಕೇಳಿದ್ದರಿಂದ ಸದ್ಯ ನನ್ನ ಬಳಿ ಹಣವಿಲ್ಲ ನಾನು ಕೊಟ್ಟಾಗ ಇಸ್ಕೊ ಬೇಕು ಅಂತ ಬೆದರಿಕೆ ಹಾಕಿದನಂತೆ ಈ ಹಿನ್ನೆಲೆಯಲ್ಲಿ ಮತ್ತೆ ರಾಜಿ ಸಂಧಾನದ ಮೂಲಕ ಪ್ರಕರಣ ತಣ್ಣಗಾಗಿತ್ತು ಆದರೆ ಭಾನುವಾರ ನವೀನ್ ಮತ್ತು ಸಾಗರ್ ಇಬ್ಬರೂ ಮಾರುತಿ ಕಾರಿನಲ್ಲಿ ಬಂದು ಹಣ ಕೊಡುವುದಾಗಿ ಆತನನ್ನು ಕರೆದುಕೊಂಡು ಹೋಗಿ ಕೊಲೆಗೈದಿದ್ದಾರೆ.
ಕೊನೆಯದಾಗಿ ಲಿಖಿತ್ ಗೌಡ ಕಳೆದ ಎಂಟು ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಸ್ವಂತ ಕಾರ್ ಕ್ಲಿನಿಕ್ ಮಾಡಿ ವರ್ಷವೂ ಕಳೆದಿರಲಿಲ್ಲ ಆದರೆ ಹಣದ ವಿಚಾರವಾಗಿ ಸ್ನೇಹಿತರೆ ಕೊಲೆ ಮಾಡಿದ್ದು ಮಾತ್ರ ತುಂಬಾ ನೋವಿನ ಸಂಗತಿ.ಒಟ್ಟಾರೆ ಕಷ್ಟದಲ್ಲಿ ಸ್ನೇಹಿತರು ಹಾಕ್ತಾರೆ ಅನ್ನೋ ಮಾತು ಸುಳ್ಳಾಗಿದೆ ದುಶ್ಮನ್ ಕಹಾ ಹೇ ಅಂದ್ರೆ ಬಗಲ್ ಮೇ ಹಂದ ಹಾಗೆ ಸ್ನೇಹಿತನಿಂದಲೇ ಹಣದ ವಿಚಾರವಾಗಿ ಕೊಲೆಯಾಗಿದ್ದು ಮಾತ್ರ ದೊಡ್ಡ ದುರಂತವೇ ಸರಿ.
ಹಣವನ್ನ ವಾಪಸ್ ನೀಡದ ಹಿನ್ನೆಲೆಯಲ್ಲಿ ಸದ್ಯ ಕೊಲೆಯಾಗಿರುವ ಲಿಖಿತ್ ಗೌಡ ಹಣವನ್ನ ವಾಪಸ್ ಹಿಂದಿರುಗಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದ.ಆದರೆ ಹಣವನ್ನ ನೀಡಲು ಹಿಂದೇಟು ಹಾಕಿದ್ದನಂತೆ ನವೀನ್. ಹಾಗಾಗಿ ಇದರಿಂದ ಕೋಪಗೊಂಡ ಲಿಖಿತ್ ಗೌಡ 10 ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ ಆಕ್ಟಿವ್ ಹೋಂಡಾ ಬೈಕ್ ಚೀಸ್ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.
ಫೆಬ್ರವರಿ 5ರಂದು ಸಂಜೆ 6:30ಕ್ಕೆ ಹಣ ಕೊಡುವುದಾಗಿ ಕರೆಸಿಕೊಂಡು ನವೀನ ಹಾಗೂ ಸಾಗರ್ ಲಿಖಿತ್ ಗೌಡ ನನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹಾಸನ ಬೆಂಗಳೂರು ಮಾರ್ಗವಾಗಿ ಹೊರಟು ಮಧ್ಯ ಭಾಗದಲ್ಲಿ ಎಲ್ಲರ ಮೊಬೈಲನ್ನು ಸ್ವಿಚ್ ಆಫ್ ಮಾಡಿಸಿ ನಂತರ ಹಾಸನ ತಾಲೂಕಿನ ದುದ್ದ ಸಮೀಪದ ಯೋಗಿಹಳ್ಳಿ ಫಾರೆಸ್ಟ್ ಅಲ್ಲಿ ಕರೆದದ್ದು ಕೊಲೆ ಮಾಡಿದ್ದು ಪೊಲೀಸರ ತೀವ್ರ ಶೋಧ ಕಾರ್ಯ ನಡುವೆ ಲಿಖಿತ್ ಗೌಡನ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಆರೋಪಿಗಳ ಎಡೆಮುರಿ ಕಟ್ಟಲು ಈಗಾಗಲೇ ಎರಡು ತಂಡ ರಚನೆ ಮಾಡಿದ್ದಾರೆ. ಇನ್ನು ಲಿಖಿತ್ ಗೌಡನ ಕೊಲೆ ಪ್ರಕರಣ ತಿಳಿಯುತ್ತಿದ್ದಂತೆ ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.