ಸಿ.ಟಿ. ರವಿಗೆ ಮಾತಿನಲ್ಲೇ ಗುದ್ದಿದ ಸಿದ್ದು.!!! ಹಿಂದೂಗಳ ಹತ್ಯೆಯಾಗಲು ಆರ್​ಎಸ್​ಎಸ್​​, ಬಿಜೆಪಿಯವರೇ ಕಾರಣ..!!

Post by: 0

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ಹಿಂದೂಗಳ ಹತ್ಯೆಗಳಾಗಿವೆ ಎಂದು ಹೇಳಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ, ನಮ್ಮ ಕಾಲದಲ್ಲಿ ಹಿಂದೂಗಳಷ್ಟೇ ಅಲ್ಲ, ಅಲ್ಪಸಂಖ್ಯಾತರ ಕೊಲೆ ಆಗಿವೆ. ಅವುಗಳೆಲ್ಲ ಬೇರೆ ಬೇರೆ ವಿಚಾರಕ್ಕೆ ಆಗಿರುವ ಕೊಲೆಗಳಾಗಿವೆ.

ನಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಹಿಂದೂಗಳ ಹತ್ಯೆಯಾಗಲು ಆರ್​ಎಸ್​ಎಸ್​​, ಬಿಜೆಪಿಯವರೇ ಕಾರಣರಾಗಿದ್ದಾರೆ. ಪರೇಶ್​ ಮೇಸ್ತ ಕೊಲೆಯಾದಾಗ ದೊಡ್ಡ ಗಲಾಟೆ ಮಾಡಿದ್ದರು. ಆಗ ಮೇಸ್ತ ಪ್ರಕರಣವನ್ನ ಸಿಬಿಐಗೆ ಕೊಟ್ಟಿದ್ದೆ, ಆಮೇಲೆ ಏನಾಯ್ತು ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಪಾಕಿಸ್ತಾನದಲ್ಲಿ ಸ್ಪರ್ಧೆ ಮಾಡಿದರಷ್ಟೇ 150 ಸ್ಥಾನ ಗೆಲ್ಲುತ್ತದೆ ಎಂದು ಲೇವಡಿ ಮಾಡಿದ್ದ ಶಾಸಕ ಸಿ.ಟಿ.ರವಿಗೆ ಟಾಂಗ್ ಕೊಟ್ಟ ಸಿದ್ಧರಾಮಯ್ಯ, ಕರ್ನಾಟಕ ಪಾಕಿಸ್ತಾನದಲ್ಲಿ ಇದೆಯಾ?ಭಾರತದಲ್ಲಿದೆಯಾ? ಚುನಾವಣೆ ನಡೆಯುತ್ತಿರುವುದು ಪಾಕಿಸ್ತಾನದಲ್ಲಾ? ಕರ್ನಾಟಕದಲ್ಲಾ? ಪೆದ್ದು ಪೆದ್ದಾಗಿ ಮಾತನಾಡುತ್ತೀರಲ್ಲಾ ಎಂದು ಕಿಡಿಕಾರಿದರು.

Leave a comment

Make sure you enter all the required information, indicated by an asterisk (*). HTML code is not allowed.

No Internet Connection