ಮುಖ್ಯ ಶಿಕ್ಷಕಿಯನ್ನು ಶಿಕ್ಷಣಾಧಿಕಾರಿಯ ಕಚೇರಿಗೆ ನಿಯೋಜನೆ. ವಿದ್ಯಾರ್ಥಿಗಳ ಪೋಷಕರಿಂದ ಪ್ರತಿಭಟನೆ...!!!!

Post by: 0

ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿ, ಕೊಡಿಗೆಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೀಣಾ ಎಂಬ ಮುಖ್ಯ ಶಿಕ್ಷಕಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲಸಕ್ಕಾಗಿ ಯೋಜನೆ ಮಾಡಿಕೊಂಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳ ಪೋಷಕರುಗಳಾದ ರಘುಕುಮಾರ್ ರವರ ನೇತೃತ್ವದಲ್ಲಿ ಇಂದು ಸರ್ಕಾರಿ ಶಾಲೆಯ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಘುಕುಮಾರ್ ಮುಖ್ಯ ಶಿಕ್ಷಕಿ ವೀಣಾ ಅವರು, ಬಂದಾಗಿನಿಂದ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಉತ್ತಮವಾಗಿದ್ದು, ಎಸ್, ಎಸ್, ಎಲ್, ಸಿ ,ಫಲಿತಾಂಶ ಜಿಲ್ಲೆಯಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯಲು ಈ ಶಿಕ್ಷಕಿಯು ನೀಡುವ ಗುಣಮಟ್ಟದ ಶಿಕ್ಷಣ, ಹಾಗೂ ಇಂಗ್ಲಿಷ್ ಪರಿಣಿತಿ, ಮಕ್ಕಳಲ್ಲೂ ಉತ್ತೇಜಿಸಿ, ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಾಗಿರುತ್ತಾರೆ.  ಜೊತೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪೆಣಂಬೂತವಾಗಿರುವ ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಕ್ಕಳಿಗೆ ಅರ್ಥೈಸುತ್ತಿದ್ದರು, ಆದರೆ ಈ ಮುಖ್ಯ ಶಿಕ್ಷಕಿಯನ್ನು ತಾಲೂಕು ಶಿಕ್ಷಣಾಧಿಕಾರಿಯ ಕಚೇರಿಗೆ ನಿಯೋಜನೆ ಮಾಡಿಕೊಂಡಿರುವುದು ಖಂಡನೀಯ ಎಂದರು.

ಈ ಬಗ್ಗೆ ಈ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರ ಮುಖಾಂತರ ಒಂದು ಅರ್ಜಿಯನ್ನು ಸಹ ನೀಡಲಾಗಿದ್ದು, ಇದಕ್ಕೆ ಉತ್ತರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮುಖ್ಯ ಶಿಕ್ಷಕಿ ವೀಣಾ ಅವರನ್ನು ಮತ್ತೆ ಅದೇ ಶಾಲೆಗೆ ನಿಯೋಜನೆ ಮಾಡುತ್ತೇವೆ ಎಂಬ ಆದೇಶವನ್ನು ಮಾಡಿದ್ದಾರೆ, ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಅವರು ಇಲ್ಲಿಯವರೆಗೂ ಯಾವುದೇ ನಿಯೋಜನೆ ಮಾಡದೆ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದರು.

ಇನ್ನು ಮತ್ತೊಬ್ಬ ಪೋಷಕರಾದ ಸೋಮನಹಳ್ಳಿ ಜಗದೀಶ್ ಅವರು ಮಾತನಾಡಿ. ಈ ಶಾಲೆಗೆ ಕಳೆದ ಹತ್ತು ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವೀಣಾ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಿಯೋಜನೆ ಮಾಡಿರುತ್ತಾರೆ. ಇನ್ನೇನು ಸಮೀಪದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರಲಿದ್ದು, ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳುತ್ತದೆ, ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಲು ಈ ಶಿಕ್ಷಕಿಯೂ ಇಲ್ಲದಿರುವುದರಿಂದ ಸಾಧ್ಯವಾಗುತ್ತಿಲ್ಲ,  ಹಾಗಾಗಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಕೂಡಲೇ, ಪ್ರಭಾರದಲ್ಲಿರುವ ಈ ಮುಖ್ಯ ಶಿಕ್ಷಕಿಯನ್ನು ಮತ್ತೆ ಸರ್ಕಾರಿ ಪ್ರೌಢಶಾಲೆ ಕೊಡಗಿಹಳ್ಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು.

 ಜೊತೆಗೆ ತಾಲೂಕಿನ ಶಾಸಕರ ಬಳಿಯಲ್ಲೂ ಹಲವು ಬಾರಿ ನೇರವಾಗಿ ಇದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಹೇಳಲಾಗಿ ಅವರ ಮುಂದೆ ಮಾಡುತ್ತೇವೆಂದು ಹೇಳಿ, ನಂತರ ಶಾಸಕರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಅವರ ಮಾತನ್ನು ಕೂಡ ಗಾಳಿಗೆ ತೂರಿದ್ದಾರೆ, ಎಂದು ಜಗದೀಶ್ ಆರೋಪಿಸಿದರು,
Last modified on Saturday, 11 February 2023 13:22

Leave a comment

Make sure you enter all the required information, indicated by an asterisk (*). HTML code is not allowed.

No Internet Connection