ನಿಮ್ಮ ಜಾತಕದಲ್ಲಿ "ಕಾಳಸರ್ಪ ದೋಷ" ಇದೆಯಾ .!!!! ದೋಷಗಳ ಸುಲಭ ಪರಿಹಾರ ಹೇಗೆ?!!!.

Post by: 0

ಜ್ಯೋತಿಷ್ಯ ಶಾಸ್ತ್ರ ಜಾತಕದಲ್ಲಿ "ಸರ್ಪ ದೋಷ" ಇದೆ ಎಂದಾಕ್ಷಣ ಮನಸ್ಸು ಮುದುಡುತ್ತದೆ ಇನ್ನಿಲ್ಲದ ಭೀತಿ ಆವರಿಸುತ್ತದೆ. ಗ್ರಹದೋಷದ ಕಾರಣ ಅಂಜಿಕೊಂಡು ಇರುವ ಬದಲು ಸುಲಭ ಪರಿಹಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಶ್ಚಿಂತರಾಗಿ.

ಕಾಳಸರ್ಪ ದೋಷ : ಜನನಕಾಲದಲ್ಲಿ "ನಕ್ಷತ್ರ" ಮತ್ತು "ಲಗ್ನ" ಕುಂಡಲಿಗಳಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ, ಒಂದೊಮ್ಮೆ ನಿಶ್ಚಿತಾರ್ಥ ಮತ್ತು ವಿವಾಹ ಸಮಯದಲ್ಲಿ ಶುಭಲಗ್ನ ಇಲ್ಲದಿದ್ದರೂ ಕಾಳ ಸರ್ಪ ದೋಷ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಕಾಳಸರ್ಪ ದೋಷವು ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ಕಾಳಸರ್ಪ ದೋಷದ ಕಾರಣ ವಿವಾಹ ಹಾಗೂ ಸಂತಾನ ಯೋಗದಲ್ಲಿ ವಿಳಂಬವಾಗುತ್ತದೆ. ಚಿತ್ತ ಚಾಂಚಲ್ಯ ಹೆಚ್ಚಿರುತ್ತದೆ.


ದೋಷ ಪರಿಹಾರ ನಾಗಪ್ರತಿಷ್ಠೆ ಮಾಡಿಸುವುದು, ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪದೋಷ ನಿವಾರಣಾ ಪೂಜೆ ಮಾಡಿಸುವುದು. ಮನೆಯಲ್ಲಿ 21 ದಿನಗಳ ಕಾಲ ಅಖಂಡವಾಗಿ ಜ್ಯೋತಿ ಬೆಳಗಿಸುವುದು. ಪ್ರತಿನಿತ್ಯ ಗಾಯತ್ರಿ ಮತ್ತು ಲಲಿತಾಂಬ ಅಷ್ಠೋತ್ತರಗಳನ್ನು ಫಠಿಸುವುದು. ಹೀಗೆ ಮಾಡುವುದರಿಂದ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ.

Last modified on Wednesday, 22 February 2023 14:44

Leave a comment

Make sure you enter all the required information, indicated by an asterisk (*). HTML code is not allowed.

No Internet Connection