Displaying items by tag: Literature

ನಿಮ್ಮ ಜಾತಕದಲ್ಲಿ "ಕುಜ ದೋಷ" ಇದೆಯಾ .!!!! ಗ್ರಹದೋಷಗಳ ಸುಲಭ ಪರಿಹಾರ ಹೇಗೆ?!!!.

15 February, 2023

ಜ್ಯೋತಿಷ್ಯ ಶಾಸ್ತ್ರ : ಜಾತಕದಲ್ಲಿ 'ಕುಜ ದೋಷ' ಇದೆ ಎಂದಾಕ್ಷಣ ಮನಸ್ಸು ಮುದುಡುತ್ತದೆ ಇನ್ನಿಲ್ಲದ ಭೀತಿ ಆವರಿಸುತ್ತದೆ. ಗ್ರಹದೋಷದ ಕಾರಣ ಅಂಜಿಕೊಂಡು ಇರುವ ಬದಲು ಸುಲಭ ಪರಿಹಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಶ್ಚಿಂತರಾಗಿ.

ಕುಜ ದೋಷ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾನವನ ಮೇಲೆ ಕುಜ(ಅಂಗಾರಕ)ನ ಪ್ರಭಾವ ಹೆಚ್ಚಿರುತ್ತದೆ. ಕುಜ ದೋಷದ ಕಾರಣ ಜೀವನದ ಗತಿಯೇ ಬದಲಾಗುತ್ತದೆ. ಮುಖ್ಯವಾಗಿ ಕಂಕಣ ಭಾಗ್ಯ ಮತ್ತು ಸಂತಾನ ಯೋಗದಲ್ಲಿ ವಿಳಂಬ, ಸಾಲದ ಭಾದೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ಮನೆಯಲ್ಲಿ ಅಶಾಂತಿ, ಮತಿ ಭ್ರಮಣೆ, ಆರೋಗ್ಯದಲ್ಲಿ ಏರುಪೇರು, ಕಳತ್ರ ದೋಷ (ಗಂಡ ಹೆಂಡಿರ ನಡುವೆ ಮನಸ್ತಾಪ), ಆಕಸ್ಮಿಕ ಅಪಘಾತ ಮತ್ತು ಅವಗಡಗಳು, ನಿರುದ್ಯೋಗ ಮತ್ತಿತರ ದೋಷಗಳು ಕಾಣಿಸುತ್ತವೆ.

ದೋಷ ಪರಿಹಾರ:ಕುಜ ದೋಷವು ಮುಖ್ಯವಾಗಿ ವಾಸ್ತು ಚಕ್ರದ ಮೇಲೆ ಅಧಿಕ ಪ್ರಭಾವ ಬೀರುತ್ತದೆ. ಹಾಗಾಗಿ ವಾಸ್ತು ತಜ್ಞರನ್ನು ಸಂಪರ್ಕಿಸಿ ದೋಷ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಒಳಿತು. ಏಳು ದಿನಗಳ ಪರ್ಯಂತ ಸಪ್ತಾಗ್ನಿ ಪೂಜೆ (ಅಖಂಡ ಜ್ಯೋತಿ) ಯನ್ನು ಮಾಡುವುದು ಉತ್ತಮ. ಕೆಂಪು ಗುಲಾಬಿ ಹೂಗಳಿಂದ ಶಕ್ತಿ ದೇವತೆಯರನ್ನು ಪೂಜಿಸುವುದು, ಮಂಗಳವಾರದಂದು ನದಿದಡದಲ್ಲಿ ಇರುವ ಯಾವುದಾದರೊಂದು ದೇವರಿಗೆ ಅಭಿಷೇಕ ಸಲ್ಲಿಸಿ ಅಂದು ಉಪವಾಸ ವ್ರತ ಆಚರಿಸುವುದು. ಕೆಂಪು ವಸ್ತ್ರಗಳನ್ನು ದಾನಮಾಡಬೇಕು. ಹೀಗೆ ಮಾಡುವುದರಿಂದ ಕುಜನು ಸಂಪ್ರೀತನಾಗಿ ಜ್ಞಾನ, ಬಲ, ಐಶ್ವರ್ಯ, ತೇಜಸ್ಸು ಮತ್ತು ಶಕ್ತಿಯ ವೃದ್ಧಿಗೆ ನೆರವಾಗುತ್ತವೆ.

No Internet Connection